ಮುಖ ಪುಟ ದೇವಸ್ಥಾನದ ಬಗ್ಗೆ ದರ್ಶನ ಮತ್ತು ಸೇವೆಗಳು ಸೌಲಭ್ಯಗಳು ಇ-ಸೇವೆ ಮತ್ತು ಕಾಣಿಕೆ ಪ್ರವಾಸಿ ತಾಣಗಳು ಛಾಯಾಚಿತ್ರ ಸಂಗ್ರಹ ನಮ್ಮ ಸಂಪರ್ಕ
banner1 banner2 banner3 banner4 banner5 banner6 banner7
1 2 3 4 5 6 6

ರಾಮನಾಥಪುರ ಸ್ಥಳ ಪುರಾಣ

ರಾಮನಾಥಪುರ, ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ. ಈ ಸ್ಥಳ ಪವಿತ್ರ ಕಾವೇರಿ ನದಿಯ ಎಡ ದಂಡೆಯ ಮೇಲಿದ್ದು, ಕರ್ನಾಟಕ ರಾಜ್ಯದ ಒಂದು ಪ್ರಮುಖ ಯಾತ್ರಾ ಮತ್ತು ಪ್ರವಾಸಿ ತಾಣವಾಗಿ ಹೆಸರುವಾಸಿಯಾಗಿದೆ. ರಾಮನಾಥಪುರ ಶತ-ಶತಮಾನಗಳಿಂದ ಪವಿತ್ರ ಸ್ಥಳವಾಗಿ ಗುರುತಿಸಿಕೊಂಡಿದ್ದು "ದಕ್ಷಿಣ ಕಾಶಿ" ಎಂದು ಪ್ರಖ್ಯಾತಿ ಹೊಂದಿದೆ. ತ್ರೇತಾಯುಗದ ಶ್ರೀರಾಮಚಂದ್ರನು ಈಶ್ವರನ ಲಿಂಗವನ್ನು ಪೂಜಿಸಿದ ಸ್ಥಳವೆಂಬ ಕಾರಣದಿಂದ ಈ ಗ್ರಾಮಕ್ಕೆ "ರಾಮನಾಥಪುರ" ಎಂಬ ಹೆಸರು ಬಂದಿದೆ ಎಂದು ಪ್ರತೀತಿಯಿದೆ. ಈ ಗ್ರಾಮದಲ್ಲಿ ಹಲವಾರು ದೇವಾಲಯಗಳಿರುವುದರಿಂದ "ದೇವಾಲಯಗಳ ಪಟ್ಟಣ" ಎಂದೂ ಸಹ ಪ್ರಸಿದ್ದವಾಗಿದೆ. ರಾಮನಾಥಪುರದಲ್ಲಿರುವ ಹೆಸರುವಾಸಿಯಾಗಿರುವ ದೇವಾಲಯಗಳೆಂದರೆ ಪ್ರಸನ್ನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ, ಚತುರ್ಯುಗ ಶ್ರೀ ರಾಮೇಶ್ವರ ದೇವಾಲಯ, ಶ್ರೀ ಪಟ್ಟಾಭಿರಾಮ ಸ್ವಾಮಿ ದೇವಾಲಯ, ಶ್ರೀ ಅಗಸ್ತ್ಯೇಶ್ವರ ಸ್ವಾಮಿ ದೇವಾಲಯ, ಶ್ರೀ ರಾಘವೇಂದ್ರ ಸ್ವಾಮಿ ಮಠ ಮುಂತಾದವುಗಳು.

ಕಾವೇರಿ ನದಿಯಲ್ಲಿ ಪವಿತ್ರ ಸ್ನಾನವನ್ನು ಮಾಡಿ, ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಸೇವೆಯನ್ನು ಭಕ್ತಿಯಿಂದ ಮಾಡಿದರೆ, ಅವರ ಜನ್ಮಜನ್ಮಾಂತರದ ಪಾಪ-ಕರ್ಮಗಳೆಲ್ಲವೂ ಕರಗಿ ಹೋಗುವುದೆಂಬ ನಂಬಿಕೆಯಿದೆ. ಪ್ರತಿದಿನ ನೂರಾರು ಭಕ್ತಾದಿಗಳು, ಯಾತ್ರಾತ್ರಿಗಳು ಮತ್ತು ಪ್ರವಾಸಿಗರು ತಮ್ಮ ಹರಕೆ ಮತ್ತು ಮನಸ್ಸಿನ ಅಭೀಷ್ಠೆಗಳನ್ನು ಭಗವಂತನ ಪೂಜಾ-ಕೈಂಕರ್ಯದ ಮೂಲಕ ಈಡೇರಿಸಿಕೊಳ್ಳಲು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಪ್ರತಿ ವರ್ಷ ಡಿಸೆಂಬರ್-ಜನವರಿ ತಿಂಗಳಿನಲ್ಲಿ ನಡೆಯುವ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಸಾವಿರಾರು ಭಕ್ತಾದಿಗಳು ಸ್ವಾಮಿಯ ದರ್ಶನಕ್ಕೆ ಭೇಟಿ ನೀಡುತ್ತಾರೆ.

ರಾಮನಾಥಪುರ ಪಟ್ಟಣವು ಹಾಸನ, ಮೈಸೂರು ಹಾಗೂ ಮಡಿಕೇರಿ ಜಿಲ್ಲಾ ಕೇಂದ್ರಗಳಿಂದ ಬಹುತೇಕ ಕೇಂದ್ರ ಸ್ಥಳದಲ್ಲಿದ್ದು ಕರ್ನಾಟಕದ ಎಲ್ಲೆಡೆಯಿಂದಲೂ ಬಸ್ ವ್ಯವಸ್ಥೆ ಇರುತ್ತದೆ. ಇದರ ಜೊತೆಗೆ ರಾಮನಾಥಪುರ ದನಗಳ ಜಾತ್ರೆ, ತಂಬಾಕು ಮಾರುಕಟ್ಟೆ, ಅಡಿಕೆ ಮಾರುಕಟ್ಟೆ, ಕೃಷಿ ಮತ್ತು ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ.