ಮುಖ ಪುಟ ದೇವಸ್ಥಾನದ ಬಗ್ಗೆ ದರ್ಶನ ಮತ್ತು ಸೇವೆಗಳು ಸೌಲಭ್ಯಗಳು ಇ-ಸೇವೆ ಮತ್ತು ಕಾಣಿಕೆ ಪ್ರವಾಸಿ ತಾಣಗಳು ಛಾಯಾಚಿತ್ರ ಸಂಗ್ರಹ ನಮ್ಮ ಸಂಪರ್ಕ




ಇ-ಸೇವೆ/ಇ-ಕಾಣಿಕೆ/ಇ-ದೇಣಿಗೆ

ಭಕ್ತಾದಿಗಳು ತಮ್ಮ ಅನುಪಸ್ಥಿತಿಯಲ್ಲಿ ಭಗವಂತನ ಸೇವೆ/ಪೂಜೆ ಸಲ್ಲಿಸಲು ಅನುಕೂಲವಾಗುವಂತೆ ಪ್ರಸನ್ನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವು "ಇ-ಸೇವೆ/ಇ-ಕಾಣಿಕೆ/ಇ-ದೇಣಿಗೆ" ಸೌಕರ್ಯವನ್ನು ಇತ್ತೀಚೆಗೆ ಪ್ರಾರಂಭಿಸಿದೆ. ಈ ಸೌಲಭ್ಯವನ್ನು ಪಡೆಯಲು ಇಚ್ಚಿಸುವ ಭಕ್ತಾದಿಗಳು ತಾವು ಬಯಸುವ ಸೇವೆಯ ಮೊತ್ತದ ಜೊತೆಗೆ ಅವರ ಮತ್ತು ಅವರ ಕುಟುಂಬದವರ ಹೆಸರು, ಗೋತ್ರ, ಜನ್ಮ ನಕ್ಷತ್ರ ಹಾಗೂ ಅಂಚೆ ವಿಳಾಸವನ್ನು ದೇವಸ್ಥಾನದ ವಿಳಾಸಕ್ಕೆ ಅಂಚೆಯ ಮೂಲಕ ಕಳುಹಿಸಿಕೊಡಬೇಕು.

"ಇ-ಸೇವಾ" ಸೌಲಭ್ಯದ ಮೂಲಕ ಸೇವೆ ಸಲ್ಲಿಸಲು ಬಯಸುವ ಭಕ್ತಾದಿಗಳು ಸೇವಾ ಮೊತ್ತವನ್ನು "ಬ್ಯಾಂಕ್ ಚೆಕ್/ಬ್ಯಾಂಕ್ ಡಿಮ್ಯಾಂಡ್ ಡ್ರಾಫ್ಟ್ (ಡಿ.ಡಿ)/ಅಂಚೆ ಮನಿ ಆರ್ಡರ್ (ಎಂ.ಒ)" ಮುಖೇನ ಪ್ರಸನ್ನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವಿಳಾಸಕ್ಕೆ ಅಂಚೆಯ ಮೂಲಕ ಕಳುಹಿಸಿ ಕೊಡಬೇಕು. ಬ್ಯಾಂಕ್ ಚೆಕ್ ಅಥವಾ ಬ್ಯಾಂಕ್ ಡಿ.ಡಿಯನ್ನು "ಪಾರುಪತ್ತೇಗಾರ್, ಪ್ರಸನ್ನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ರಾಮನಾಥಪುರ" ಹೆಸರಿಗೆ ತೆಗೆದಿರಬೇಕು.

ಭಕ್ತಾದಿಗಳು ಬಯಸುವುದಾದರೆ "ಇ-ಸೇವಾ" ಹಣವನ್ನು ನೇರವಾಗಿ ಆನ್-ಲೈನ್ ಬ್ಯಾಂಕ್ ವರ್ಗಾವಣೆ ಮೂಲಕ ಸಹ ಜಮಾ ಮಾಡಬಹುದು. ಆದರೆ ಹಣ ಜಮಾ ಮಾಡಿರುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ದೇವಸ್ಥಾನದ ಪಾರುಪತ್ತೇಗಾರ್ ರವರಿಗೆ ದೂರವಾಣಿ ಮೂಲಕ ತಿಳಿಸಬೇಕು.

ನಮ್ಮ ಬ್ಯಾಂಕ್ ಖಾತೆಯ ವಿವರಗಳು::

ಶೀರ್ಷಿಕೆ ವಿವರಗಳು
ಖಾತೆ ಹೆಸರು ಪಾರುಪತ್ತೇಗಾರ್, ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, ರಾಮನಾಥಪುರ
ಖಾತೆ ಸಂಖ್ಯೆ 6542500100398401
ಬ್ಯಾಂಕ್ ಹೆಸರು ದಿ ಕರ್ಣಾಟಕ ಬ್ಯಾಂಕ್ ಲಿ
ಶಾಖೆ ಹೆಸರು ರುದ್ರಪಟ್ಟಣ ಶಾಖೆ, ಅರಕಲಗೂಡು ತಾ||, ಹಾಸನ ಜಿಲ್ಲೆ
ಐ.ಎಫ್.ಎಸ್.ಸಿ ಕೋಡ್
KARB0000654

ವಿಶೇಷ ಸೂಚನೆ::

1. ದೇವಸ್ಥಾನದ ಹೆಸರಿಗೆ ಕಳುಹಿಸಲಾಗುವ ಎಲ್ಲಾ ರೀತಿಯ ಸೇವಾ/ಚಂದಾ ಹಣವನ್ನು ದೇವಸ್ಥಾನದ ಬ್ಯಾಂಕ್ ಖಾತೆಗೆ ಸಂದಾಯ ಮಾಡಲಾಗುವುದು. ಈ ಬಗ್ಗೆ ಹಣ ಕಳುಹಿಸಿದವರಿಗೆ ಯಾವುದೇ ಮಾಹಿತಿ ನೀಡಲಾಗುವುದಿಲ್ಲ.
2. ಇ-ಸೇವೆ ಸಲ್ಲಿಸುವ ಭಕ್ತಾದಿಗಳು ಸೇವಾ ಹಣವನ್ನು ಕೇವಲ ಚೆಕ್/ಡಿ.ಡಿ/ಎಂ.ಒ ಮೂಲಕ ಮಾತ್ರ ಕಳುಹಿಸಬೇಕು. ಯಾವುದೇ ಸಂದರ್ಬದಲ್ಲು ನಗದು ಹಣವನ್ನು ಕಳುಹಿಸಕೂಡದು ಮತ್ತು ಅಂತಹ ನಗದನ್ನು ಸ್ವೀಕರಿಸಲಾಗುವುದಿಲ್ಲ
3. ರೂ ೫೦ಕ್ಕಿಂತಾ ಹೆಚ್ಚಿನ ಸೇವಾ ಹಣವನ್ನು ಕಳುಹಿಸುವ ಭಕ್ತಾದಿಗಳಿಗೆ ಅಂಚೆಯ ಮುಖಾಂತರ ಪ್ರಸಾದವನ್ನು ತಲುಪಿಸಲಾಗುವುದು.
4. ಇ-ದೇಣಿಗೆ ನೀಡಲಾಗುವ ಯಾವುದೇ ಮೊತ್ತಕ್ಕೆ ಆದಾಯ ತೆರಿಗೆ ವಿನಾಯಿತಿ ಲಭ್ಯವಾಗುವುದಿಲ್ಲ.

ದೇವಾಲಯದ ವಸತಿ ಗೃಹಕ್ಕೆ ಉದಾರ ಧನ ಸಹಾಯಕ್ಕೆ ಮನವಿ

ಭಕ್ತಾದಿಗಳ, ಯಾತ್ರಿಕರ ಮತ್ತು ಪ್ರವಾಸಿಗರ ತಂಗುವ ವ್ಯವಸ್ಥೆಗಾಗಿ ಪ್ರಸನ್ನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವು ಶ್ರೀ ಸಂಪುಟ ನರಸಿಂಹಸ್ವಾಮಿ ಮಠ ಸುಬ್ರಮಣ್ಯ ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಸುಮಾರು ಎರಡು ಕೋಟಿ ಅಂದಾಜು ವೆಚ್ಚದಲ್ಲಿ ಅತ್ಯಂತ ಸುಸಜ್ಜಿತವಾದ ಮತ್ತು ನವೀನ ಮಾದರಿಯ ವಸತಿ ಗೃಹವನ್ನು ನಿರ್ಮಾಣ ಮಾಡುತ್ತಿದೆ.

ಈ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಸಾರ್ವಜನಿಕರು, ಭಕ್ತಾದಿಗಳು ಉದಾರವಾಗಿ ಧನ ಸಹಾಯ ಮಾಡಿ ಯಶಸ್ವಿಗೊಳಿಸಬೇಕೆಂದು ಕೋರುತ್ತೇವೆ.
ರೂ ಎರಡು ಲಕ್ಷ ಅಥವಾ ಅದಕ್ಕೂ ಹೆಚ್ಚಿನ ದೇಣಿಗೆಯನ್ನು ನೀಡುವ ಭಕ್ತರ/ಅವರ ಬಯಕೆಯ ಹೆಸರಿನಲ್ಲಿ ಒಂದು ಕೊಠಡಿ ನಿರ್ಮಿಸಲಾಗುವುದು..